ಮೊದಲಿಗೆ..... ನನಗೆ ಶುಕ್ರವಾರ 3-11 ನೇ ತಾರೀಖು ರಾತ್ರಿ ಮುಖಪುಟಕ್ಕೆ ಹಾಗೆ ಭೇಟಿ ನೀಡಿದಾಗ ನಮ್ಮ ಆಪ್ತರಾದ ರಾಜು ಯಾದವ್ ಸರ್ ರವರಿಂದ ನಾಳೆ ಮತ್ತು ನಾಡಿದ್ದು ಬೆಳಗ್ಗೆ 10:00 ಗಂಟೆಗೆ ನಮ್ಮೂರಾದ ಬಾಗಲಕೋಟೆಯಲ್ಲಿ ಅಖಿಲ ಭಾರತೀಯ ಸಾಹಿತ್ಯ ಪರಿಷತ್. ಕರ್ನಾಟಕ ಬೆಂಗಳೂರು
ಮತ್ತು
ಅಖಿಲ ಭಾರತೀಯ ಸಾಹಿತ್ಯ ಪರಿಷತ್ ಜಿಲ್ಲಾ ಘಟಕ ಬಾಗಲಕೋಟ
ಇವರ ಸಹಯೋಗದಲ್ಲಿ (4-11-17 ಮತ್ತು 5-11-17 ರ ಎರಡು ದಿನಗಳ) ಉ.ಕ ಸಾಹಿತ್ಯ ಕಾರ್ಯಕರ್ತರ
ಸಾಹಿತ್ಯ ಕಮ್ಮಟ (ಅಭ್ಯಾಸ ವರ್ಗ)' ಇಂಥ ಸಮಾರಂಭ ವೀರಭದ್ರೇಶ್ವರ ಸಾಂಸ್ಕೃತಿಕ ಭವನದಲ್ಲಿ ನಡೆಯಲಿದೆ, ವಿನು ನೀವು ಬನ್ನಿ. ಮತ್ತೆ ನಾವು ಭೇಟಿಯಾಗೋಣ ಅಂತಾ ತುಂಬಾ ಪ್ರೀತಿಯಿಂದ ಆಮಂತ್ರಿಸಿದರು.
ದಿಢೀರನೆ ಬಂದ ಆಮಂತ್ರಣವನ್ನು ಸರಿಯೆಂದು ಒಪ್ಪಿಕೊಂಡೆ. ಹಾಗೂ ವೀರಭದ್ರೇಶ್ವರ ಸಾಂಸ್ಕೃತಿಕ ಭವನವೂ ನಮ್ಮ ಮನೆಗೆ ಎರಡು ಹೆಜ್ಜೆಯ.ಷ್ಟು ಹತ್ತಿರವಿದ್ದ ಕಾರಣ ಖಂಡಿತಾ ಬರ್ತೀನಿ ಸರ್. ಅಂತಾ ಒಪ್ಕೊಂಡು, ಸಾಹಿತ್ಯ ಕಮ್ಮಟ ಕಾರ್ಯಕ್ರಮದ ಕಲ್ಪನೆಯೂ ಇರದ ನಾನು ಹೇಗಿರಬಹುದೆನ್ನುವ ಕುತೂಹಲದಿಂದ ನನ್ನ ಕುಟುಂಭದ ಜತೆ ಮರುದಿನ ಹತ್ತರ ನಂತರ ಹೋಗಿ ವೇಧಿಕೆಯ ಮುಂದೆ ಆಸೀನನಾದೆ.
ನಾ ಬಂದಿದ್ದನ್ನು ಗಮನಿಸಿ ಸಂಚಾಲಕರು ಸ್ವಾಗತಿಸಿದ ಪರಿ ನನಗೆ ಸಾಹಿತ್ಯ ಕಮ್ಮಟ ಸಮಾರಂಭವನ್ನು ಹತ್ತಿರವಾಗಿಸಿತು.
ಸಾಂಸ್ಕೃತಿಕ ಭವನಕ್ಕೆ ಆಗಮಿಸಿದ್ದ ಗಣ್ಯರಿಗೆ ಹಿರಿಯರಾದ ಕೋಟಿ ಸರ್ ರವರಿಂದ ಪುಷ್ಪಾರ್ಪಣೆ ಮಾಡಿಸಲಾಯಿತು.
ಸ್ವಲ್ಪ ಹೊತ್ತಿಗೆ ಕಾರ್ಯಕ್ರಮವು ನೆರೆದಂಥ ಗಣ್ಯರಿಂದ ದೀಪ ಬೆಳಗುವ ಮುಖೇನ ಸಮಾರಂಭವನ್ನು ಉದ್ಘಾಟಿಸಲಾಯಿತು.
ಅನಂತರ ವೇದಿಕೆಗೆ ಆಗಮಿಸಿದ ಅ.ಭಾ.ಸಾ.ಪರಿಷತ್ ರಾಜ್ಯ ಘಟಕ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ರಘುನಂದನ್ ಭಟ್ ರವರ ಪ್ರಾಸ್ತಾವಿಕ ಪರಿಚಯ, ನನಗೆ ಹಿರಿಯರ ನುಡಿಮುತ್ತುಗಳನ್ನು ಕೇಳುವ ಆಸಕ್ತಿಯನ್ನು ತರಿಸಿತು.
ಆಮೇಲೆ ವೇದಿಕೆಗೆ ಬಂದ ಧಾರವಾಡ ಆಕಾಶವಾಣಿಯ ನಿರ್ದೇಶಕರಾದ ಶ್ರೀ ದಿವಾಕರ್ ಹೆಗಡೆ ಸರ್ ರವರ ಶಿಭಿರಾರ್ಥಿಗಳನ್ನು (ನನ್ನನ್ನೂ ಸೇರಿಸಿ) ಪರಿಚಯಿಸಿಕೊಂಡ ಪರಿ ಮತ್ತು ಅವರ ಸರಳ ನುಡಿ ಎಂಥವರನ್ನು ನಿಬ್ಬೆರಗು ಮಾಡುವಂತಿತ್ತು.
11:30 ರಿಂದ (ಅಪರಾಹ್ನ) 12:30 ರ ವರೆಗೆ
'ಸಾಹಿತ್ಯ ಕಾರ್ಯಕರ್ತರ ಮುಂದಿರುವ ಸವಾಲುಗಳು' ಕುರಿತಾದ ವಿಷಯದ ಬಗ್ಗೆಯ ಅವರ ಉಪನ್ಯಾಸ ಮತ್ತು ಅವರು ಸಾಂದರ್ಭಿಕವಾಗಿ ನೀಡಿದ ಸಲಹೆಗಳು ಹಾಗೂ ಕೆಲ ಮಾಹಿತಿಗಳು ಎಲ್ಲರ ಗಮನ ಸೆಳೆದವು.
ಮಾತಿನ ಮಧ್ಯದಲ್ಲಿ ಅವರು ನೀಡಿದ ಒಂದು ಸರಳ ಉದಾಹರಣೆ, ರೈತ ಸತತವಾಗಿ ಬಿಡದೆ ಕಾಳುಗಳನ್ನು ಭೂಮಿಗೆ ವಿಸ್ತಾರವಾಗಿ ಬೆಳೆದರೆ ಮಾತ್ರ ನಮಗೆ ಹೇಗೆ ಅನ್ನ ಸಿಗುತ್ತದೆಯೋ ಹಾಗೆ ಬರಹಗಾರರು ಸತತ ಪ್ರಯತ್ನದಿಂದ ಮಾತ್ರ ತಮ್ಮಲ್ಲಿನ ಕವಿತ್ವವನ್ನು ಕಾಣಲು ಸಾಧ್ಯ ಎನ್ನುವ ಮಾತು ನನಗೆ ಮರೆಯದಂಥ ನೆನಪಾಗಿ ಉಳಿಯಿತು.
ಹಾಗೂ ಸಭಿಕರು ಕೇಳಿದ ಪ್ರಶ್ನೆಗಳಿಗೆ ತಾಳ್ಮೆಯಿಂದ ವಿವರವಾಗಿ ಉತ್ತರಿಸಿದ ಅವರ ವಿಶಾಲ ಚಿಂತನೆಗಳು ನಮಗೂ ಪರಿಚಯವಾಗಿ ಕಾರ್ಯಕ್ರಮಕ್ಕೆ ಮೆರಗು ತಂದಿತು.
ತದನಂತರ 12:30 ರಿಂದ 01:15 ರ ವರೆಗಿನ ಬೀಳಗಿಯ ಸರ್ಕಾರಿ ಪ.ಪೂ ಕಾಲೇಜಿನ ಉಪನ್ಯಾಸಕರಾದ ಡಾ. ಕೆ. ಎಸ್ ಬಂಗಾರಿ ಸರ್ ರವರ 'ವಚನ ಸಾಹಿತ್ಯದಲ್ಲಿ ಜೀವನ ಮೌಲ್ಯಗಳು' ಎನ್ನುವ ಅದ್ಭುತ ವಿಚಾರದ ಕುರಿತಾದ ಉಪನ್ಯಾಸದಲ್ಲಿ ವಚನಗಳು ನಮಗೆ ನೀಡಿದ ಕೊಡುಗೆಗಳು ಎಂಥದ್ದು, ಹಾಗೂ ವಚನಕಾರರ ಚಿಂತನೆಗಳ ಪರಿಚಯ ನಮಗೆ ಮಾರ್ಗದರ್ಶಿಸಿತು. ಮಾತಿನ ಮಧ್ಯೆ ವಚನಗಳನ್ನು ಸುಶ್ರಾವ್ಯವಾಗಿ ಪಠಿಸಿ ಅದರ ಆಳಗಲವನ್ನು ತಿಳಿಸಿದ ರೀತಿ ಎಂಥವರಿಗೂ ಮಾದರಿ ಯಾಗುವಂಥದ್ದು ಎಂದರೆ ತಪ್ಪಾಗಲಾರದು.
1:15 ಕ್ಕೆ ಭವನದಲ್ಲಿ ಏರ್ಪಡಿಸಿದ ರುಚಿಯಾದ ಊಟ ಸವಿದ ನಂತರ ದಿವಾಕರ್ ಸರ್ ರವರು ನನ್ನ ಬಳಿ ಬಂದು ಆತ್ಮೀಯತೆಯಿಂದ ಮಾತನಾಡಿಸಿ ಪ್ರಶಂಸಿದಕ್ಕೆ ನಾ ಮನಸೋತೆ.
ನಂತರ ಮತ್ತೆ ಎರಡನೇ ಉಪನ್ಯಾಸ ಗೋಷ್ಠಿ ಆರಂಭವಾಯಿತು.
2:30 ರಿಂದ 3:30 ರ ವರೆಗೆ ದಿವಾಕರ್ ಹೆಗಡೆ ಸರ್ ರಿಂದ 'ಸಾಹಿತ್ಯ ಸಮಾಜ ಮತ್ತು ನಾವು' ಎಂಬ ಕುರಿತ ವಿಷಯದ ಚರ್ಚೆ ಬಹಳ ಸುಂದರವಾಗಿ ನಡೆದಿತ್ತು.
ಪ್ರತಿಯೊಂದು ಮಾತಿಗೂ ಉದಾಹರಣೆ ಸಹಿತ ವಿವರಿಸಿದ ಪರಿ ಎಲ್ಲರನ್ನೂ ಮಂತ್ರ ಮುಗ್ಧರನ್ನಾಗಿಸಿ ಕಿವಿಯಗಲಿಸಿ ಏಕಚಿತ್ತದಿಂದ ಕೇಳುವಂತೆ ಮಾಡಿತು.
ಸಾಹಿತ್ಯಗಳು ಯಾಕೆ ಓದಲು ಅಷ್ಟು ಹಿತ ಎನ್ನಿಸುತ್ತವೆಂದರೆ,
ಸಾಹಿತ್ಯ ಎನ್ನುವ ಪದದಲ್ಲಿ ಹಿತ ಅಡಗಿದೆ.
ಅದು ಹೇಗೆಂದರೆ, ಸಾ 'ಹಿ ತ' ್ಯ ಎನ್ನುವಂಥ ಅವರ ನುಡಿ ನನಗೆ ಸಾಹಿತ್ಯಾಸಕ್ತಿಯ ಒಲವನ್ನು ಇನ್ನು ಹೆಚ್ಚಿಸಿದ್ದು ಸುಳ್ಳಲ್ಲ.
ಅವರು ತಿಳಿಸಿದ ಈ ವಿವರಣೆ ಎಲ್ಲರಿಗೂ ಮನದಟ್ಟಾಗಿ ಜೋರಾಗಿ ಚಪ್ಪಾಳೆ ತಟ್ಟುವ ಮೂಲಕ ಜನರೆಲ್ಲ ಸರ್ ರವರನ್ನು ಪ್ರಶಂಸಿಸಿದರು.
3:30 ರಿಂದ 4:30 ರ ವರೆಗೆ ಹುಬ್ಬಳ್ಳಿಯ ಪ್ರಚಾರಕರಾದ ಡಾ. ರವೀಂದ್ರಜಿ ಯವರ 'ಪರಿಸರ ಮತ್ತು ಸಾಹಿತ್ಯ' ದ ಬಗ್ಗೆ ಅದ್ಭುತವಾದ ಉಪನ್ಯಾಸ ಜರುಗಿತು. ಅದರಲ್ಲಿ ಅವರು ತಿಳಿಸಿದ ಪರಿಸರಕ್ಕೆ ಮತ್ತು ಸಾಹಿತ್ಯಕ್ಕೆ ಎಂಥಾ ಅವಿನಾಭಾವ ಸಂಬಂಧವಿದೆ, ಮತ್ತು ಸಾಹಿತ್ಯದಲ್ಲಿ ಪರಿಸರವನ್ನು ಹೇಗೆ ಅಳವಡಿಸಿಕೊಳ್ಳಬಹುದು ಎನ್ನುವ ಮಾತುಗಳು ಬಲು ಸೊಗಸಾಗಿತ್ತು.
ಹಾಗೂ ಪರಿಸರದಲ್ಲಿ ಸಾಹಿತ್ಯದ ಪಾತ್ರವೇನು ಎಂಬುವುದನ್ನು ಬಹಳ ಸವಿಸ್ತಾರ ತಿಳಿಸಿಕೊಟ್ಟರು.೫
ಅನಂತರ ಬಂದ ನಮ್ಮ ರಾಜು ಯಾದವ್ ಸರ್ ರನ್ನು ನೋಡಿ ನನಗಾದ ಆನಂದ ಅಷ್ಟಿಷ್ಟಲ್ಲ. ಸಂಜೆ ಚಹಾ ವಿರಾಮದ ಸಮಯದಲ್ಲಿ ಅವರು ನನ್ನನ್ನು ತಮ್ಮ ಹುಡುಗನೆಂದು ಕೆಲ ಗಣ್ಯರಿಗೆ ಪರಿಚಯಿಸಿ ಕೊಟ್ಟ ರೀತಿ ಹಾಗೂ ಎಲ್ಲರೂ ಪ್ರೋತ್ಸಾಹಿಸಿದ ಪರಿ ಗೆ ನಾ ಧನ್ಯನಾದೆ.
ಅನಂತರ 5:30 ರಿಂದ 6:30 ರ ವರೆಗೆ
ಹಿರಿಯ ಕಾದಂಬರಿಕಾರರಾದ ಶ್ರೀ ಚಂದ್ರಕಾಂತ್ ತಾಳಿಕೋಟಿ ಮತ್ತು ಹಿರಿಯ ಕಥೆಗಾರರು ಕಾದಂಬರಿಕಾರರೂ ಆದ ಶ್ರೀ ಶಿವಾನಂದ ಅಂಗಡಿ ಯವರಿಂದ
'ಸಾಹಿತ್ಯ ಚಿಂತನೆ: ಕಥೆ ಕಾದಂಬರಿ ರಚನೆ' ಯ ಬಗ್ಗೆಗಿನ ಉದಾಹರಣೆ ಸಹಿತ ನುಡಿಗಳು ಅತ್ಯದ್ಭುತವಾಗಿತ್ತು.
ಚಂದ್ರಕಾಂತ್ ಸರ್ ರವರು,
ಕಥೆಗಳನ್ನು ಯಾವ ಥರ ಜನರನ್ನೂ ಸೆಳೆಯುವಂತೆ ಕಟ್ಟಬೇಕು, ಹಾಗೂ ಒಂದು ಕಥೆಗೆ ಅವಶ್ಯಕವಾದ ಅಂಶಗಳೇನು ಎನ್ನುವುದನ್ನು ವಿವರಾತ್ಮಕವಾಗಿ ತಿಳಿಸಿಕೊಟ್ಟರು.
ಮತ್ತು ಕಥೆ ಬರೆಯುವಾಗ ಎಷ್ಟು ಮಗ್ನನಾಗಿ ಬರೆಯಬೇಕೆಂಬ ಅವರ ಉಧಾಹರಣೆ, ಒಬ್ಬ ಕಥೆ ಬರಹಗಾರ ತಿಂಗಳುಗಟ್ಟಲೆ ಸತತವಾಗಿ ಅದರಲ್ಲಿ ಮಗ್ನನ್ಗಿ ಬರೆಯುತ್ತಿದ್ದ. ಅವನ ತಾಯಿ ಅವನಿಗೆ ದಿನಾಲೂ ಊಟ ನೀಡುತ್ತಿದ್ದರು. ಕೊನೆಗೆ ಅವನು ಬರೆದ ಕಥೆ ಪೂರ್ಣಗೊಂಡಾಗ ಅವನ ಅಮ್ಮ ನೀಡಿದ್ದ ಊಟದ ಮೊದಲನೇ ತುತ್ತು ಬಾಯಿಗಿಟ್ಟು 'ಅಮ್ಮ ನೀ ಇವತ್ತು ಮಾಡಿದ ಅಡುಗೆ ಗೆ ಉಪ್ಪಾಗಿಲ್ಲ' ಎಂದಾಗ ಅವನ ತಾಯಿ 'ಮಗನೆ ನೀನು ಬರೆದ ಕಥೆ ಇವತ್ತು ಮುಗಿಯಿತಲ್ವಾ' ಎಂದು ಪ್ರಶ್ನಿಸಿದಾಗ 'ಹೌದು, ಅದು ನಿನಗೆ ಹೇಗೆ ಗೊತ್ತು' ಎಂದು ಕುತೂಹಲದಿಂದ ಕೇಳಿದಾಗ ಅವನ ತಾಯಿ ಹೇಳಿದ ಮಾತೇನೆಂದರೆ 'ಮಗನೆ, ನೀನು ಕಥೆ ಬರೆಯಲು ಶುರು ಮಾಡಿದ್ದಾಗಿನಿಂದ, ನಾನು ಅಡುಗೆ ಗೆ ಉಪ್ಪನ್ನೆ ಹಾಕಿಲ್ಲ ಕಣಪ್ಪ,ಆಗ ನಿನಗೆ ಗೊತ್ತಾಗದ್ದು ಈಗ ಗೊತ್ತಾಯಿತೆಂದರೆ ನೀನು ಮಗ್ನನಾಗಿ ಬರೆದ ಕಥೆ ಮುಗಿದಿದೆ ಎಂದರ್ಥ' ಎಂದಳಂತೆ. ಹಾಗೆ ಒಬ್ಬ ಕಥೆಗಾರ ಅದರಲ್ಲಿ ಸಂಪೂರ್ಣವಾಗಿ ಮಗ್ನನಾಗಿ ಬರೆದಾಗ ಮಾತ್ರ ಕಥೆಗೆ ಜೀವ ಬರುತ್ತದೆ. ಎನ್ನುವ ಮಾತು ನನಗೆ ಬಹಳ ಹಿಡಿಸಿತು.
ಅನಂತರ ಉಪಸ್ಥಿತರಿದ್ದ ಸರ್ ಶಿವಾನಂದ್ ಅಂಗಡಿ ಇವರು ಕಾದಂಬರಿಗಳ ರಚನೆ ಕುರಿತು ತಮ್ಮ ಅನುಭವಗಳನ್ನು ಹಂಚಿಕೊಂಡು ತಮ್ಮ ಕಾದಂಬರಿಗಳ ಕಿರುಪರಿಚಯ ಮಾಡಿಸಿ, ಕಾದಂಬರಿ ಬರೆಯುವ ಶೈಲಿಯನ್ನು ಸಂಕ್ಷೀಪ್ತವಾಗಿ ತಿಳಿಸಿದರು.
ಇವರ ಉಪನ್ಯಾಸ ಮುಗಿದ ನಂತರ ನಾನು 'ಕಥೆ ಮತ್ತು ಕಾದಂಬರಿಗಳಿಗಿರುವ ವ್ಯತ್ಯಾಸಗಳೇನು ಮತ್ತು ಅದನ್ನು ಬರೆಯಲು ಬೇಕಾದ ತಂತ್ರಗಳೇನು' ಎನ್ನುವಂಥ ಪ್ರಶ್ನೇಯನ್ನು ಅವರ ಮುಂದಿಟ್ಟಾಗ 'ನನ್ನ ಪ್ರಕಾರ ಅವೆರಡೂ ಒಂದೆ, ಕಥೆ ಕಾದಂಬರಿಗಳಿಗೆ ಅಂತಹ ವ್ಯತ್ಯಾಸವಿಲ್ಲ. ಕಥೆಯನ್ನೇ ಕಾದಂಬರಿಯಾಗಿ ಸುಂದರವಾಗಿ, ಸವಿಸ್ತಾರವಾರವಾಗಿ ಬರೆಯಬಹುದು, ಮತ್ತು ತಂತ್ರಗಳೆಂದರೆ, ಇನ್ನೊಬ್ಬರನ್ನು ಓದಿಸಿಕೊಂಡು ಹೋಗುವಂಥ ಜಾಣ್ಮೆ, ಮತ್ತು ಕುತೂಹಲವಾಗಿ ಕಟ್ಟುವಿಕೆ. ಎಂದಾಗ ನನಗೆ ತೃಪ್ತಿಕರ ಉತ್ತರ ಸಿಕ್ಕಿತು.
6:45 ರಿಂದ 7:45 ರ ಅವಧಿಯಲ್ಲಿ
ಶ್ರೀಮತಿ ಲಲಿತಾ ಹೊಸಪ್ಯಾಟಿ ಮತ್ತು
ಶ್ರೀಮತಿ ಸುರೇಖಾ ಕುಲಕರ್ಣಿ. ಇವರು
'ಸಾಹಿತ್ಯ ಚಿಂತನೆ: ಕವಿತೆ/ಕಾವ್ಯ ರಚನೆ' ಯ ಬಗ್ಗೆ ಉಪನ್ಯಾಸ ನಿಗಧಿ ಮಾಡಲಾಗಿತ್ತು. ಆದರೆ ಕಾರಣಾಂತರದಿಂದ ಅವರುಗಳು ಬಾರದಿದ್ದರಿಂದ ಉಪಸ್ಥಿತರಿದ್ದ ಡಾ. ಕೆ. ಎಸ್ ಬಂಗಾರಿ ಸರ್ ರವರು ತಾವೇ ಉಪನ್ಯಾನ ನೀಡಿದರು. ಕಾವ್ಯ ಜಗತ್ತಿಗೆ ಹೇಗೆ ಮಾದರಿಯಾಗುತ್ತದೆ. ಮತ್ತು ಅದರ ಆಯಾಮಗಳನ್ನು ಬಹಳ ಸುಂದರವಾಗಿ ತಿಳಿಸಿದರು. ಹಾಗೂ ಮೊದಲಿನ ಕಾವ್ಯಗಳಲ್ಲಿ ಕಪ್ಪು ಬಿಳುಪಷ್ಟೇ ಇತ್ತು. ಅಂದರೆ ಅದಕ್ಕೆ ಹೆಚ್ಚಿನ ಬಣ್ಣಗಳಿರಲಿಲ್ಲ. ಆದರೆ ಈ ವಿಧ್ಯಮಾನದಲ್ಲಿ ಕಾವ್ಯಕ್ಕೆ ಎಲ್ಲ ಬಣ್ಣಗಳನ್ನು (ಭಾವಗಳನ್ನು) ಸೇರಿಸಲಾಗಿದೆ. ಎಲ್ಲ ಬಣ್ಣಗಳಿಂದ ಹೇಗೆ ಹೋಲಿಯಾಡಲು ಸಾಧ್ಯವೋ ಹಾಗೆಯೆ ಕಾವ್ಯಕ್ಕೆ ಎಲ್ಲ ಬಣ್ಣಗಳ ಲೇಪನ ಮಾಡಿದಾಗ ಅದು ಸುಂದರವಾಗಿ ರೂಪಿತಗೊಂಡು, ಓದುಗನ ಮನ ಗೆಲ್ಲುತ್ತದೆ ಎನ್ನುವ ಮಾತಿಗೆ ಎಲ್ಲರಿಂದ ಚಾಪ್ಪಾಳೆಗಳ ಸುರಿಮಳೆ ಹರಿದಿತ್ತು.
ಕೊನೆಯದಾಗಿ ಉಪಸ್ಥಿತರಿದ್ದ ಶ್ರೀಶೈಲ್ ಗೋಳಗೊಂಡ ಸರ್ ರವರಿಂದ ಕವನ ರಚನೆಯ ಕುರಿತಾದ ಸಂಕ್ಷೀಪ್ತ ಉಪನ್ಯಾಸ ಸುಂದರವಾಗಿತ್ತು.
ಹಾಗೂ ಅವರು ನೀಡಿದ ಮೊದಲಿನ ಕಾವ್ಯಗಳ ಉಧಾಹರಣೆಗಳು ಎಲ್ಲರ ಮುಖದಲ್ಲಿ ನಗು ತರಿಸಿತ್ತು.
ಕೊನೆಯದಾಗಿ ಕವನ ರಚನೆಗೆ ನಮ್ಮನ್ನು ನಾವು ಹೇಗೆ ತೊಡಗಿಸಿಕೊಳ್ಳಬೇಕೆನ್ನುವ ಅವರ ಆಶುಭಾಷಣ ಎಲ್ಲರಿಗೂ ಒಪ್ಪಿಗೆಯಾಯಿತು.
ಅನಂತರ ಯಾರ ಬಳಿಯೂ ಪ್ರಶ್ನೇಗಳಿರಲಿಲ್ಲ ಎಂದರೆ ಗಣ್ಯರ ಉಪನ್ಯಾಸ ಯಾವ ಮಟ್ಟಕ್ಕೆ ಎಲ್ಲರಿಗೂ ತೃಪ್ತಿ ತಂದಿದೆ ಎಂದು ತಿಳಿದು,
ನಾ ಬಂದದ್ದು ಸಾರ್ಥಕವಾಯಿತು ಎಂದು ನನ್ನನ್ನು ಆಮಂತ್ರಿಸಿದ ನನ್ನ ಪ್ರೀತಿಯ raju yadav ಸರ್ ಗೆ ಮನದಲ್ಲೇ ಧನ್ಯವಾದ ಅರ್ಪಿಸಿದೆ.
ನಂತರ ಅವರು ನನ್ನ ಪಕ್ಕಕ್ಕೆ ಬಂದಾಗ 'ಸರ್ ಒಂದೆರಡು ಫೋಟೋ' ಅಂದೆ.
ಅದಕ್ಕೆ ಹುಮ್ಮಸ್ಸಿನಿಂದ ಹಲವು ಹಿರಿಯ ಸಾಹಿತ್ಯ ಬರಹಗಾರರನ್ನು ಕೂಡಿಸಿ ತಮ್ಮ ಫೋನಿನಲ್ಲಿ ಒಂದೆರಡು ಫೋಟೋಗಳನ್ನು ಕ್ಲಿಕ್ಕಿಸಿದರು.
8 ಗಂಟೆಗೆ ಜಮಖಂಡಿಯಿಂದ ಕರೆಸಲಾಗಿದ್ದ ಬಿ.ಎನ್ ಅಸ್ಕಿ ತಂಡದವರಿಂದ ಉ.ಕ ಜಾನಪದ ಗೀತೆಗಳ ಗಾಯನ ಎಲ್ಲರನ್ನೂ ಸಂತಸದಲ್ಲಿ ಕುಳಿತು ತಲೆಯಾಡಿಸುವಂತೆ ಮಾಡಿತು.
ಹಿರಿಯ ಅನುಭವಿ ಗಾಯಕರಾದ ಅಸ್ಕಿ ತಂಡದಿಂದ ತತ್ವ ಪದಗಳು, ದಾಸರ ಪದಗಳು, ಗೀಗಿಪದ, ಮತ್ತು ಜಾನಪದ ಗೀತೆಗಳು ಭರದಿಂದ ಸಾಗಿದವು.
ಅದರಲ್ಲೂ ನನಗೆ ಬಲು ಪ್ರಿಯವಾದ ಸವದತ್ತಿ ಎಲ್ಲಮ್ಮನ ಗೀತೆ ಹಾಗೂ ಶಿಶುನಾಳ ಸಾಹೇಬರ ಗೀತೆಯನ್ನು ಗಾಯಕರು ರಾಗಬದ್ಧವಾಗಿ ಹಾಡಿದ ರೀತಿ ಬಲು ಇಷ್ಟವಾಯಿತು. ಕೊನೆಯದಾಗಿ ಹಿರಿಯರು ಮಾಡಿದ #ಎಚ್ಚಮ್ಮನಾಯಕ ನ 'ಏಕ ಪಾತ್ರಾಭಿನಯ' ಎಲ್ಲರಿಗೂ ನಾಟಕನ್ನು ಕಣ್ಣಮುಂದೆ ತಂದಿರಿಸಿತು.
ಹಾಗೂ ಮೇಳದವರು ಹಾಡಿನ ಮಧ್ಯ ಧ್ವನಿಗೂಡಿಸಿದ್ದು ನನಗೆ ತುಂಬಾ ವಿಶೇಷವಾಗಿತ್ತು....
5-11-17 ಮರುದಿನ ಬೆಳಗ್ಗೆ ಅವಸರವಾಗಿ ಹೋಗಿ ವೇಧಿಕೆ ತಲುಪುವ ಹೊತ್ತಿಗೆ ತಡವಾಗಿ 09:00 ಆಗಿ ಉಪಹಾರದ ವಿರಾಮ ಬಿಟ್ಟು ದಿನದ ಎರಡನೇಯ ಉಪನ್ಯಾಸ ಶುರುವಾಗುವ ಹಂತಕ್ಕೆ ತಲುಪಿತು.
ಏರ್ಪಡಿಸಿದ ಉಪಹಾರ ಸೇವಿಸಿ
ಬೆಂಗಳೂರು ವಿಜಯವಾಣಿ ಹಾಗೂ ದಿಗ್ವಿಜಯ ವಾಹಿನಿ ಸಂಪಾದಕರಾದ ಹರಿಪ್ರಕಾಶ್ ಕೋಣೆಮನೆ ಸರ್ ರಿಂದ
'ವೈಚಾರಿಕತೆಯ ಸುಳಿಯಲ್ಲಿ ಸಾಹಿತ್ಯ' ವಿಷಯ ಕುರಿತಾದ ಉಪನ್ಯಾಸ ಆರಂಭವಾಯಿತು.
ವಿಚಾರವನ್ನು ಸಾಹಿತ್ಯವನ್ನಾಗಿ ಪರಿವರ್ತಿಸಿ ಹೇಗೆ ಚಿಂತನೆ ನಡೆಸಿದರೆ ಒಳಿತು ಮತ್ತು ಕೆಲ ಉತ್ತಮ ವಿಚಾರಗಳ ಬಗ್ಗೆ ಬಲು ಸೊಗಸಾಗಿ ಹೇಳಿಕೊಡುತ್ತಾ ಹೋದರು.
ವಿಷಯದ ಮಧ್ಯದಲ್ಲಿ ಬಂದ ವೈಚಾರಿಕತೆಯಲ್ಲಿ ರಾಮಾಯಣ ಮತ್ತು ಸಂಸ್ಕೃತದ ಬಗ್ಗೆಯು ಬಲು ವಿಸ್ತಾರವಾಗಿ ಮನದಟ್ಟಾಗುವಂತೆ ತಿಳಿಸಿದರು. ಅವರ ಮಾತುಗಳು ಎಷ್ಟು ಅರ್ಥಗರ್ಭಿತವಾಗಿತ್ತು ಎಂದರೆ,
ರಾಮನ ವಿಚಾರಗಳು ಮತ್ತು ಆತನನ್ನು ಹೇಗೆ ನಮ್ಮ ಬದುಕಿಗೆ ಆದರ್ಶವನ್ನಾಗಿ ಇಟ್ಟುಕೊಳ್ಳಬಹುದು. ಮತ್ತು ಆಚರಣೆಯ ವಿಚಾರದಲ್ಲಿ ಆಗುವ ಸರಿ ತಪ್ಪುಗಳು ಹೇಗೆ ಮೂಲಾಧಾರಿತವಾದವು, ಮತ್ತು ರಾಮಾಯಣ ಬರಹದ ವಿಚಾರ ಹೇಗಿತ್ತು ಎಂಬುವುದನ್ನು ಸುಲಲಿತವಾಗಿ ಹೇಳಿದರು. ರಾಮ ಜನಿಸಿದ ದಿನಾಂಕವನ್ನು ಸಾಂಧರ್ಭಿಕವಾಗಿ ತಿಳಿಸಿದಾಗ ಅವರ ಚಿಂತನೆಯ ಆಳ ಮತ್ತು ಅಗಲ ಎಲ್ಲರಿಗೂ ಮಾದರಿಯಾಗತೊಡಗಿದವು. ಹಾಗೂ ಸಂಸ್ಕೃತ ಎಂದರೇನು, ಅದರ ಆಗು ಹೋಗುಗಳ ಬಗ್ಗೆ, ಹಾಗೂ ಸಂಸ್ಕೃತ ಕೇವಲ ಕನ್ನಡಕ್ಕೆ ಮಾತ್ರ ಮೂಲವಾಗಿಲ್ಲ. ಅದು ಎಲ್ಲ ಭಾಷೆಗಳ ಮೂಲ, ಹಾಗೂ ಸಂಸ್ಕೃತ ಅಧ್ಯಯನ ಹೇಗಿರಬೇಕು ಎನ್ನುವುದರ ಕುರಿತು ಸಾಂಧರ್ಭಿಕವಾಗಿ ಹೇಳಿದ್ದು ಎಲ್ಲರಿಗೂ ತುಂಬಾ ಇಷ್ಟವಾಯಿತು.
ಹಾಗೂ ಉಪಸ್ಥಿತರಿದ್ದ ರಘುನಂದನ್ ಭಟ್ ಸರ್ ರವರ ಉಪನ್ಯಾಸ ಅವರ ಅನುಭವಗಳನ್ನು ನಮ್ಮೊಂದಿಗೆ ಹಂಚಿಕೊಂಡ ಸಮಯ ಅರ್ಥಪೂರ್ಣವಾಗಿತ್ತು.
ಮತ್ತು ಹರಿಪ್ರಕಾಶ್ ಸರ್ ರವರ ಉಪನ್ಯಾಸ ಮುಗಿದ ನಂತರ ಸಭೀಕರು ಕೇಳಿದ ಎಲ್ಲ ಪ್ರಶ್ನೇಗಳಿಗೆ ಬಲು ನಾಜೂಕಾಗಿ ಉತ್ತರಿಸಿ ಅಭ್ಯಾಸ ವರ್ಗದ ಕಮ್ಮಟ ಕಾರ್ಯಕ್ರಮಕ್ಕೆ ಕಳೆ ತಂದರು.
ಇಷ್ಟೆಲ್ಲಾ ಆದಮೇಲೆ ಸಿಕ್ಕ ಹರಿಪ್ರಕಾಶ್ ಕೋಣೆಮನೆ ಸರ್, 'ನಿನಗೆ ಬರಿಯುವ ಶಕ್ತಿ ಖಂಡಿತಾ ಇದೆ, ಏನಾದರೂ ಉತ್ತಮವಾಗಿ ಬರೆದರೆ ನನಗೆ ತಿಳಿಸು' ಎಂದು ಅವರ ನಂಬರ್ ಕೊಟ್ಟರು.
ಸರಿ ಸರ್... ಸಧ್ಯಕ್ಕೆ ಕನಿಷ್ಟ ಎಂಬತ್ತು ಕವನ ಮತ್ತೆ ಕವಿತೆಗಳನ್ನು ಆರಿಸಿ ಒಗ್ಗೂಡಿಸಿಟ್ಟಿದ್ದೇನೆ. ಸುಮಾರು ನೂರಾ ಇಪ್ಪತ್ತಾದಮೇಲೆ ನನ್ನ ಮೊದಲನೇಯ ಕವನ ಸಂಕಲನವನ್ನು ಹೊರತರುವ ಆಸೆ ಇದೆ ಎಂದಾಗ.
ಬಹಳ ಖುಷಿಯಿಂದ 'ಕವನಗಳು ಸಿದ್ಧವಾದ ನಂತರ ನನಗೆ ತಿಳಿಸು' ಎಂದು ಪ್ರಶಂಸಿಸಿ ಭವನದಿಂದ ನಿರ್ಗಮಿಸಿದರು..
11ರ ಹೊತ್ತಿಗೆ ಹಿರಿಯ ಸಾಹಿತಿಗಳು ಮತ್ತು ಸಂಚಾಲಕರಾದ ಶ್ರೀ ನಾರಾಯಣಜಿ ಶೆವಿರೆ ಗುರುಗಳ ಪರಿಷತ್ ಸಂಘಟನೆಯ ಬಗ್ಗೆಗಿನ ಸಾಮಾನ್ಯ ಚರ್ಚೆ ಎಲ್ಲರಿಗೂ ಪರಿಷತ್ ಸಂಘಟನೆಯನ್ನು ಹೇಗೆ ನಿಭಾಯಿಸಬೇಕು ಮತ್ತು ಸಂಘಟನೆಯ ಉದ್ದೇಶಗಳು ಹೇಗಿರಬೇಕು ಹಾಗೂ ಅದರ ಕಾರ್ಯಗಳು ಯಾವ ಮಟ್ಟದಲ್ಲಿ ಸಾಗುತ್ತಿರಬೇಕು, ಒಂದು ಸಂಘಟನೆಯ ಕಾರ್ಯಕರ್ತರು ಮಾಡುವ ಸಮಾರಂಭವನ್ನು ಕಡಿಮೆ ಖರ್ಚಿನಲ್ಲಿ ಹೇಗೆ ಮಾಡಬಹುದು, ಸಮಾರಂಭಕ್ಕೆ ಯಾರನ್ನು ಕರೆಸಿದರೆ ಒಳಿತು ಮತ್ತು ಕೆಡಕು ಎನ್ನುವುದನ್ನು ಬಲು ಸುಂದರವಾಗಿ ತಿಳಿಸಿದರು. ಹಾಗೂ ಸಾಹಿತ್ಯಕ್ಕಾಗಿ ಅವರ ಇಡೀ ಜೀವನವನ್ನೇ ಮೀಸಲಿಟ್ಚ ಸಂಗತಿಯನ್ನು ಕೇಳಿ ಆಶ್ಚರ್ಯವಾಯಿತು.
ಮಧ್ಯದಲ್ಲಿ "ಇಲ್ಲಿ ಬಂದವರಲ್ಲಿ ಯಾರೆಲ್ಲಾ ಸಾಹಿತ್ಯದ ಕುರಿತಾದ ಚರ್ಚೆಯ ಕಾರ್ಯಕ್ರಮಗಳನ್ನು ಮಾಡಿದ್ದೀರಿ ಅಥವಾ ಪಾಲ್ಗೊಳ್ಳುತ್ತಿದ್ದೀರಿ" ಏನ್ನುವ ಪ್ರಶ್ನೆಗೆ ಸಭಿಕರು ತಮ್ಮ ತಮ್ಮ ಕಾರ್ಯಗಳನ್ನು ಹೇಳಿದರು. 'ನಾನು ಸಹ ಮಾಸ ಕವಿಗೋಷ್ಠಿಯಲ್ಲಿ ಭಾಗವಹಿಸುತ್ತಿದ್ದೇನೆ ಮತ್ತು ಅಲ್ಲಿ ಎಲ್ಲರಿಂದ ಕವನವಾಚನ , ಕವಿಗೋಷ್ಠಿ ಹಾಗೂ ಹಿರಿಯರಿಂದ ಕಾವ್ಯ ವಿಮರ್ಶೆ ಮಾಡಲಾಗುತ್ತದೆ, ಆದರೆ ಇಲ್ಲಿ ಬಂದ ಕಾರಣ ಇವತ್ತು ಅಲ್ಲಿ ಪಾಲ್ಗೊಳ್ಳಲಾಗಲಿಲ್ಲ'ಎಂದು ತಿಳಿಸಿದೆ.
ಅದಕ್ಕೆ ಒಳಿತು, ನಿಮ್ಮೆಲ್ಲರ ಈ ಸಾಹಿತ್ಯ ಕಾರ್ಯ ಮತ್ತು ಚರ್ಚೆಗಳು ಪ್ರತಿನಿತ್ಯ ನಡೆಯಲಿ. ಅದರಿಂದ ಉತ್ತಮ ಬರಹಗಾರರ ಆಯ್ಕೆಗಳಾಗಲಿ, ಸಾಹಿತ್ಯವೂ ಸಮಾಜದ ಎಲ್ಲೆಡೆ ವ್ಯಾಪಿಸಿ ಇತರರಿಗೆ ಮಾದರಿಯಾಗಲಿ ಎಂದು ಹರಸಿದರು.
ಅನಂತರ ನಿಮ್ಮ ಜತೆಗಿರುವ ಸಾಹಿತಿಗಳ ಪಟ್ಟಿ ಎಲ್ಲರಿಗೂ ಅತ್ಯಗತ್ಯ ಅದರಿಂದ ಇನ್ನೂ ಸಭೆಸೇರಲು ಅನುಕೂಲವಾಗುತ್ತದೆ ಎನ್ನುವಂಥ ಸಲಹೆ ಸೂಚನೆಗಳನ್ನು ಕೊಟ್ಟರು.
ಅದಾದ ನಂತರ ಚಹಾ ವಿರಾಮ ಕೊಟ್ಟು ಮತ್ತೆ ಕೊನೆಯ ಹಂತದ ಸಂಘಟನೆಯ ಕಾರ್ಯಯೋಜನೆಗಳ ವಿಷಯವಾಗಿ ಉಪನ್ಯಾಸ ಶುರುವಾಯಿತು.
ಚಹಾ ಸೇವಿಸಿ ವೇಧಿಕೆಗೆ ಬಂದ ಡಾ. ರವೀಂದ್ರಜಿ. ಹಬ್ಬಳ್ಳಿ ಯವರು ಮಾತು ಶುರುಮಾಡಿ ತಮ್ಮ ಮಾತಿನ ಚಾತುರ್ಯದಿಂದ ಎಲ್ಲರನ್ನು ಕ್ಷಣ ಮಾತ್ರದಲ್ಲಿ ಸೆಳೆದುಬಿಟ್ಟರು.
ಅವರ ಮಾತಿನ ಪ್ರಖರತೆ ಎಷ್ಟಿತ್ತೆಂದರೆ ಕೇಳುಗರಿಗೆ ಎರಡು ಗಂಟೆ ಕಳೆದದ್ದು ಗೊತ್ತೇ ಆಗಲಿಲ್ಲ ಎನ್ನುವುದು ಶ್ಲಾಘನೀಯಕರ.
ಸಂಘಟನೆಗಳ ಕಾರ್ಯಯೋಜನೆಗಳು ಹೇಗೆ ರೂಪಿತಗೊಳ್ಳಬೇಕು ಮತ್ತು ಅದರ ಮೂಲ ಉದ್ದೇಶ ಅಭ್ಯಾಸವಾಗಿದ್ದರೆ ಆ ಸಮಯಕ್ಕೆ ಅರ್ಥವಿರುತ್ತದೆ. ಮತ್ತು ಸಾಹಿತ್ಯಾಸಕ್ತರ ವಿಚಾರಗಳನ್ನು ಮಂಡಿಸಿ ಪ್ರತಿಯೊಬ್ಬರೂ ಚರ್ಚಿಸಿದರೆ ಉತ್ತಮ ಸಮಾಜಕ್ಕೆ ಹಾದಿಯಾಗುವುದು ಎಂದರು.
ಮತ್ತು ಹರಿಪ್ರಕಾಶ್ ಸರ್ ಮಂಡಿಸಿದ ರಾಮಾಯಣದ ಕುರಿತು ತಮ್ಮ ಅನಿಸಿಕೆ ಮತ್ತು ವಿಚಾರಗಳನ್ನು ಸರಳವಾಗಿ ಬಿಡಿಸಿ ಹೇಳಿದರು. ಮತ್ತು ಯಾರೋ ಕೇಳಿದ ಕಂಬಳ,ಜಲ್ಲಿಕಟ್ಟು ಗಳಂಥ ಹಿಂಸಾತ್ಮಕ ಆಚರಣೆಗಳ ಬಗ್ಗೆಗಿನ ಪ್ರಶ್ನೇಗೆ ತಾವೇ ಉತ್ತರಿಸಿದರು.
ನನ್ನ ಪ್ರಕಾರ ಕಂಬಳ ಜಲ್ಲಿಕಟ್ಟು ಮತ್ತೆ ಟಗರು, ಕೋಳಿ ಕಾಳಗ ಇವುಗಳನ್ನು ಹಿಂಸಾತ್ಮಕವಾಗಿ ನೋಡಬಾರದು.
ಯಾಕೆಂದರೆ ಎಲ್ಲೆಡೆ ನಡೆಯುವ ಕುಸ್ತಿ ಕಾಳಗಳು ಕೇವಲ ಒಳ್ಳೇಯ ಪಟುವನ್ನು ಗುರುತಿಸಲು ಹೇಗೆ ಸೀಮಿತವೋ, ಅಂತೆಯೆ ಕಂಬಳ ದಿಂದ ಒಳ್ಳೇ ತಳಿಗಳನ್ನು ಆರಿಸಲು ಮಾತ್ರ ನಂತರ ಅವುಗಳನ್ನು ಸಮೃದ್ಧ ತಳಿಯೆಂದು ಪರಿಗಣಿಸುವುದಷ್ಟೇ ಅದರ ಉದ್ದೇಶ.
ಮತ್ತು ಅವುಗಳನ್ನು ಹಿಂಸಾತ್ಮಕ ಎನ್ನುವುದಾದರೆ, ಕುರಿ ಕೋಳಿಗಳನ್ನು ಕೊಂದು ತಿನ್ನುವುದು ಹಿಂಸಾತ್ಮಕವೇ ಸರಿ. ಹಾಗೂ ಅಧ್ಯನ ಮಾಡುವ ಸಲುವಾಗಿ ಪ್ರತಿಷ್ಟಿತ ಲ್ಯಾಬ್ ಗಳಲ್ಲಿ ದಿನನಿತ್ಯ ಕೋಟಿಗಟ್ಚಲೆ ಕೋತಿ, ನಾಯಿ, ಕಪ್ಪೆಗಳ ಮಾರಣಹೋಮ ನಡೆಯುತ್ತದೆ. ಆದರೆ ಅದನ್ನು ಮಾತ್ರ ಯಾರು ಯಾಕೆ ಪ್ರಶ್ನಿಸುವುದಿಲ್ಲ. ಎಂದಾಗ ಎಲ್ಲರು ನೀರವ ಮೌನ.
ಮತ್ತೆ ಮಾತು ಮುಂದುವರೆಸಿ ನಮಗೆ ಸಾಹಿತ್ಯದಲ್ಲಿನ ಎಷ್ಟೋ ವಿಚಾರಗಳನ್ನು ಸಂಕ್ಷೀಪ್ತವಾಗಿ ತಿಳಿಸಿಕೊಟ್ಟರು.
ಹಾಗೂ ದಿನನಿತ್ಯ ಮಾಡುವ ಕಲಸಗಳನ್ನು ಸಂಸ್ಕೃತಿಯಾಗಿ ಮಾರ್ಪಡಿಸುಕೊಳ್ಳುವುದರ ಬಗ್ಗೆ ದಿನನಿತ್ದ ಕೆಲಸವೇ ಕೃತಿ. ಸಂಸ್ಕೃತಿ ಎಂದರೆ ದಿನದ ಕೆಲಸವನ್ನು ಇನ್ನೂ ಚೆನ್ನಾಗಿ ಮಾಡಿಕೊಂಡು ಅದಕ್ಕೊಂದು ಅರ್ಥ ಬರುವಂತಾದರೆ ಅದು ಸಂಸ್ಕೃತಿ ಎಂದು ಬಹಳ ಸೊಗಸಾಗಿ ಹೇಳುತ್ತಾ ಹೋದರು.
ಆಮೇಲೆ ಹಿಂದುಸ್ಥಾನಿ ಸಂಗೀತ ಗಾಯಕರ ವೈಯಕ್ತಿಕ ಗೀತೆ ಬಲು ಸರಳ ಮತ್ತು ಮಧುರವಾಗಿ ಮನಮುಟ್ಟಿತು
ಅನಂತರ ಕಾರ್ಯಕ್ರಮದ ಸಮಾರೂಪ ಒಹಿಸಿದ ಕೋಟಿ ಸರ್ ರವರು ಬಂದಂಥ ಗಣ್ಯರ ಸಾಧನೆಗಳ ಪರಿಚಯವನ್ನು ಅಮೋಘವಾಗಿ ಮಾಡಿಸಿಕೊಟ್ಟರು. ಮಾತಿನ ಮಧ್ಯೆ ಅವರ ಹಾಸ್ಯದ ಕೆಲ ನುಡಿಗಳು ಎಲ್ಲರಿಗೂ ತಡೆಯಲಾಗದಷ್ಟು ನಗೆ ತರಿಸಿತು. ಸಾಹಿತ್ಯದಲ್ಲಿ ಗಣ್ಯರ ಸಾಧನೆಗಳು ಎಲ್ಲರಿಗೂ ಅಚ್ಚರಿ ಮೂಡಿಸಿ ಅವರ ಕೃತಿಗಳನ್ನು ಓದುವಂತೆ ಆಸೆ ಬರಲು ಮಾಡಿಟ್ಟಿತು ಎಂದರೆ ತಪ್ಪಾಗಲಾರದು.
ವಯಸ್ಸಿನಲ್ಲಿ ಹಿರಿಯರಾದ ಅವರುಗಳ ಎಲ್ಲರ ಜತೆ ಆತ್ಮೀಯತೆಯಿಂದ ಮಾತನಾಡುವ ಸರಳತೆ, ಸಾಹಿತ್ಯಾಸಕ್ತಿ ಮತ್ತು ಉತ್ಸಾಹ ಎಲ್ಲರ ಮನಗೆದ್ದಿತು. ಅವರ ಸಾಧನೆಗಳು ಬಾನೆತ್ತರಕ್ಕೆ ಏರಿದ್ದರೂ ಸಹ ಇನ್ನೂ ಕಲಿಯಬೇಕೆನ್ನುವ ನಿಟ್ಟಿನ ಅವರ ಆಸಕ್ತಿ ಎಲ್ಲರಿಗೂ ಮಾದರಿಯಾಗಿದ್ದು ಸುಳ್ಳಲ್ಲ.
ಅನಂತರ ಸಮಾರೂಪದಲ್ಲಿ ತಮ್ಮ ಅಭಿಪ್ರಾಹ ಹಂಚಿಕೊಂಡ ಉಪನ್ಯಾಸ ಗುರುಗಳು ಮತ್ತು ಶ್ರೀಮತಿ ಗೀತಾ ಮಿರ್ಜಿ ಮೇಡಮ್ ರವರು ತಮ್ಮ ಅಭಿಪ್ರಾಯ ತಿಳಿಸಿ ಎಲ್ಲರಿಗೂ ಉತ್ತಮವಾದ ಪ್ರೋತ್ಸಾಹ ನೀಡಿ ಹರಸಿದರು.
ಮತ್ತೆ ವೇದಿಕೆಗೆ ತಮ್ಮ ಅಭಿಪ್ರಾಯ ಹೇಳಲು ಬಂದ ರವೀಂದ್ರಜಿ ಯವರು. ಸಭೆಯ ಕುರಿತು ಉತ್ತಮವಾಗಿ ಮಾತನಾಡಿ, ಅಭ್ಯಾಸ ವರ್ಗದ ಕೆಲಸಗಳೇನು. ಹಾಗೂ ಅಧ್ಯಯನ ಹೇಗಿರಬೇಕು, ಶಿಬಿರಕ್ಕೂ ಮತ್ತು ವರ್ಗಕ್ಕೂ ಇರುವ ಅಜಗಜಾಂತರ ವ್ಯತ್ಯಾಸಗಳನ್ನು ತಿಳಿಸಿದರು.
ಅನಂತರ ಆಗಮಿಸಿದ ಬೆಂಗಳೂರು ವಿಧಾನ ಪರಿಷತ್ತು ಶಾಸಕರಾದ ಶ್ರೀ ಹನುಮಂತ ಆರ್ ನಿರಾಣಿ ಯವರಿಗೆ ಹೂಮಾಲೆ ಹಾಕಿ ಸನ್ಮಾನಿಸಿ ಅವರಿಂದ ಸಮಾರಂಭದ ಕುರಿತಾದ ನುಡಿಗಳು ಉತ್ತಮವಾಗಿ ಮೊಳಗಿತು
ಅದಾದಮೇಲೆ ಉಪನ್ಯಾಸಕರ ವಂದನಾರ್ಪಣೆ ವಿನಯದಿಂದ ನಡೆಯಿತು. ಕೊನೆಯದಾಗಿ ವೇದಿಕೆಗೆ ಬಂದ ಹಿಂದುಸ್ಥಾನಿ ಗಾಯಕರಿಂದ ವಂದೇ ಮಾತರಂ ಕೇಳುವ ಸೌಭಾಗ್ಯ ನಮಗೆಲ್ಲ ಒದಗಿ ಬಂದಿತ್ತು.....
ಈ ರೀತಿಯಲ್ಲಿ ಅಖಿಲ ಭಾರತೀಯ ಸಾಹಿತ್ಯ ಪರಿಷತ್. ಕರ್ನಾಟಕ ಬೆಂಗಳೂರು

ಇವರ ಸಹಯೋಗದಲ್ಲಿ (ಎರಡು ದಿನಗಳ) ಉ.ಕ ಸಾಹಿತ್ಯ ಕಾರ್ಯಕರ್ತರ (ಅಭ್ಯಾಸ ವರ್ಗದ)
ಸಾಹಿತ್ಯ ಕಮ್ಮಟ ಸಮಾರಂಭ ಯಶಸ್ವಿಯಾಗಿ ಮುಗಿಯಿತು...
ಕಾರ್ಯಕ್ರಮ ಮುಗಿದ ನಂತರ ನನಗಾದ ಅನುಭವವನ್ನು ನಾ ಎಂದೆಂದಿಗೂ ಮರೆವಂತಿಲ್ಲ.
ಯಾಕೆಂದರೆ, ಎಲ್ಲ ಉಪನ್ಯಾಸ ಮುಗಿಯಿತಲ್ಲ, ಇನ್ನು ಮನೆಗೆ ಹೊರಡಬಹುದು ಎಂದುಕೊಳ್ಳುತ್ತಿರುವಾಗ, ರಾಜು ಸರ್ ರನ್ನು ಮನೆಗೆ ಕರೆಯಬೇಕು ಎಲ್ಲಿ ಎಂದು ಅತ್ತಿತ್ತ ಕಣ್ಣಾಡಿಸುತ್ತಿರುವಾಗ.
ಬನವಾಸಿ ಇಂದ ಆಗಮಿಸಿದ
ಶ್ರೀಮತಿ ಭಾರತಿ ಮಿರ್ಜಿ mam ಬಂದು ನನ್ನನ್ನು ಪ್ರೋತ್ಸಾಹಿಸಿ ಸವಿನುಡಿಗಳಾಡಿದಾಗ ತೀರಾ ಹತ್ತಿರದವರಂತೆ ಎನಿಸಿದರು. ನಮ್ಮ ಮನೆ ಮತ್ತು ನನ್ನ ಬರಹಗಳ ಬಗ್ಗೆ ಸ್ವತಃ ಕೇಳಿ ತಿಳಿದುಕೊಂಡು ತಮ್ಮ ಕಾಳಜಿಯನ್ನು ವ್ಯಕ್ತ ಪಡಿಸುವ ನಿಟ್ಟಿನಲ್ಲಿ ಸ್ವಲ್ಪ ಹೊತ್ತು ಮುಕ್ತವಾಗಿ ಮಾತನಾಡುತ್ತಾ ಕುಳಿತರು.
ಅವರು ಉತ್ತಮ ಕಥೆಗಾರರು ಮತ್ತು ಚಿಂತಕರಾದರೂ ಸಹ ತುಂಬಾ ಆತ್ಮೀಯವಾಗಿ ವಿಹರಿಸಿದ್ದು ತುಂಬಾ ಖುಷಿ ನೀಡಿತು.
ನಂತರ ನಾ ಅವರನ್ನು ನಮ್ಮನೆಗೆ ಬನ್ರಿ mam ಅಂತಾ ಕರೆದಾಗ, ನಾವು ಅದೇ ಮಾತಾಡ್ತಾ ಇದ್ವಿ.... ನಾನು ಮತ್ತೆ ರಘುನಂದನ್ ಭಟ್ ಸರ್ ಹಾಗೂ ನಾರಾಯಣ ಶೇವಿರೆ ಸರ್ ಬರೋಣಾಂತ ಇದ್ದೀಲವಿ ಅಂದಾಗ.
ಅಂಥ ಉತ್ತಮ ಸಾಹಿತ್ಯದ ಬರಹಗಾರರು ಮತ್ತು ಉಪನ್ಯಾಕರು ಹಾಗೂ ಚಿಂತಕರು ಆದವರು ನಮ್ಮನೆಗೆ ಬರುತ್ತಿದ್ದಾರೆನ್ನುವ ಸಂತೋಷ ನನಗೆ ಸದಾ ನೆನಪಿನಲ್ಲಿ ಅಚ್ಚಳಿಯದೇ ಉಳಿಯುವಂಥದ್ದು.
ಅವರುಗಳು ಉಪನ್ಯಾಸ ನೀಡಿದ ಪರಿಗೆ ಅಚ್ಚರಿಗೊಂಡಿದ್ದೆನಾದರೂ ಅವರ ಸರಳತೆಯ ಮನೋಭಾವ ಎಲ್ಲರಿಗೂ ಮಾದರಿಯಾಗಲು ಸೂಕ್ತವೆನಿಸಿದ್ದು ನಾ ಮನೆಯತ್ತ ಹೊರಟಾಗ.
ನೋಡನೋಡುತ್ತಿದ್ದಂತೆ ನಮ್ಮ ಪುಟ್ಟದಾದ ಮನೆಗೆ ರಘುನಂದಮ್ ಭಟ್ ಸರ್. ಶೆವಿರೆ ಸರ್. ರಾಜು ಯಾದವ್ ಸರ್. ಭಾರತಿ mam ಗೀತಾ mam.ಮತ್ತೆ (ಇನ್ನೊಬ್ಬರ ಹೆಸರು ತಿಳಿಯಲಾಗಿಲ್ಲ.) ಈ ಆರು ಒಮ್ಮೆಲೆ ಜನರು ಆಗಮಿಸಿಯೇ ಬಿಟ್ಟರು...
ನಂತರ ಎಲ್ಲರೂ ತಮ್ಮ ಸವಿನುಡಿಗಳ ಜತೆಗೆ ನಮ್ಮೊಡನೆ ಬೆರೆತು, ವಿಹರಿಸಿ, ಸ್ವತಃ ಬೆನ್ನುತಟ್ಟಿ ಪ್ರೋತ್ಸಾಹಿಸಿದ್ದು ಇನ್ನು ಸಾಹಿತ್ಯಕ್ಕೆ ಅಂಬೆಗಾಲಿಡುತ್ತಿರುವ ನನಗೆ ನಿಜಕ್ಕೂ ಅಭೂತಪೂರ್ವವಾದ ಕ್ಷಣ.
ಎಲ್ಲರ ನಲ್ನುಡಿಗಳು ನನಗೆ ಇನ್ನೆಂದು ಮರೆಯಲಾಗದ ಸವಿನೆನಪನ್ನು ನೀಡಿದೆ ಎಂದರೆ ತಪ್ಪಾಗಲಾರದು.
ನಂತರ ತಮ್ಮ ನಂಬರ್ ಗಳನ್ನು ಕೊಟ್ಟು ಏನಾದರು ಬರಹಗಳಲ್ಲಿ ಸಹಾಯಗಳು ಬೇಕಾದರೆ ಮರೆಯದೆ ಕರೆಮಾಡಿ ಕೇಳು ಎನ್ನುವಂಥ ಸೂಚನೆಯ ನಗುಮುಖದೊಂದಿಗೆ ನಿರ್ಗಮಿಸಿದರು.
ಆತ್ಮೀಯರೆ... ಇದಿಷ್ಟು ನಾನು 4-11-17 ಮತ್ತು 5-11-17 ರಂದು ಮನಸಾರೆ ಅನುಭವಿಸಿದ ಕ್ಷಣಗಳು.
ಇಂಥ ಕಲ್ಪನೆಯೂ ಇಲ್ಲದ ನನಗೆ ಈ ಸಮಾರಂಭದಲ್ಲಿ ಪಾಲ್ಗೊಂಡಿದ್ದು ನನ್ನ ಸೌಭಾಗ್ಯ ಎನ್ನುವುದನ್ನು ಅತ್ಯಾನಂದದಿಂದ ಹೇಳುತ್ತೇನೆ.
ಮತ್ತು ನನ್ನ ಸಂತೋಷದ ಕ್ಷಣಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುವ ಮನಸ್ಸಾಗಿ, ಗ್ರಹಿಸಿದ್ದನ್ನು ತಕ್ಕ ಮಟ್ಟಿಗೆ ಬರೆದಿದ್ದೇನೆ....
ಎಲ್ಲರಿಗೂ ನನ್ನ ಈ ಎರಡು ದಿನಗಳ ನೆನಪಿನ ಬರಹ ಸಂತಸ ತಂದಿದೆ ಎಂದು ಭಾವಿಸುವುದರ ಜತೆಗೆ
ಹೃತ್ಪೂರ್ವಕ ಧನ್ಯವಾದಗಳೊಂದಿಗೆ
ಎಂದೆಂದಿಗೂ
ನಿಮ್ಮ ಪ್ರೀತಿಯ
ವಿನು ವಿಪಿಎಸ್.
"ಬರಹವೇ ಬಂಡವಾಳ
ಸ್ನೇಹವೇ ಜೀವಾಳ....
ಅದರ ಸವಿನೆನಪಿಗಾಗಿ ಈ ಕೆಲ ಚಿತ್ರಗಳು